ನಾವು ಅಸಾಧಾರಣ ಮತ್ತು ಅಸ್ಥಿರ ಕಾಲದಲ್ಲಿ ಬದುಕುತ್ತಿದ್ದೇವೆ. ಕರೋನವೈರಸ್ (ಕೋವಿಡ್-19) ಜಾಗತಿಕ ಸಾಂಕ್ರಾಮಿಕ ರೋಗವು ಅಮೇರಿಕಾದಲ್ಲಿ ಇನ್ನೂ ಇರುವುದರಿಂದ, ನಾವೆಲ್ಲರೂ ನಮ್ಮ ದೈನಂದಿನ ಜೀವನದಲ್ಲಿ ಮಹತ್ತಾದ ಬದಲಾವಣೆಗಳನ್ನು ಅನುಭವಿಸುತ್ತಿದ್ದೇವೆ. ತೀವ್ರ ಬಿಕ್ಕಟ್ಟಿನ ಈ ಸಮಯದಲ್ಲಿ, ಆತಂಕ ಮತ್ತು ಒತ್ತಡವು ನಿಮ್ಮನ್ನು ಸುಲಭವಾಗಿ ದಿಕ್ಕುತಪ್ಪಿಸಬಹುದು. ನಿಮ್ಮ ಶಾಂತಿ, ಆಂತರಿಕ ಸಮತೋಲನ ಮತ್ತು ಯೋಗಕ್ಷೇಮವನ್ನು ಕಾಪಾಡಿಕೊಳ್ಳುವುದು ಈಗ ಬಹಳ ಮುಖ್ಯವಾಗಿದೆ.
ನಿಮ್ಮ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಯೋಗಿಕ ಆರೋಗ್ಯ ವಿಧಾನಗಳ ಜೊತೆಗೆ ನಿಮ್ಮ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಆನ್‌ಲೈನ್‌ನಲ್ಲಿ ಹಲವಾರು ಪ್ರಬಲ ಯೋಗ ಮತ್ತು ಧ್ಯಾನ ಸಾಧನಗಳನ್ನು ಈಶಾ ಫೌಂಡೇಶನ್ ನೀಡುತ್ತದೆ.
ಕೆಳಗಿನ ದೈನಂದಿನ ಅಭ್ಯಾಸಗಳನ್ನು ಸದ್ಗುರುಗಳು ಎಲ್ಲರಿಗೂ ಒಂದು ಬೆಂಬಲವಾಗಿ ನೀಡಿದ್ದಾರೆ, ಈ ಮೂಲಕ ನಾವು ದೈಹಿಕವಾಗಿ ಮತ್ತು ಮಾನಸಿಕವಾಗಿ ಕನಿಷ್ಠ ಘರ್ಷಣೆಯೊಂದಿಗೆ ಜೀವನ ನಡೆಸಬಹುದು.
ಕೆಳಗಿನ ಮೂಲಗಳನ್ನು ಬಳಸಿಕೊಂಡು ನೀವು ಈ ಅಭ್ಯಾಸಗಳನ್ನು ಕಲಿಯಬಹುದು. ನಂತರ, ನೀವು ಸ್ವಂತವಾಗಿ ಅಥವಾ ವೀಡಿಯೊಗಳ ಮಾರ್ಗದರ್ಶನದೊಂದಿಗೆ ಅಭ್ಯಾಸ ಮಾಡಬಹುದು.
ಈಶಾ ಕ್ರಿಯಾ ಸದ್ಗುರುಗಳಿಂದ ವಿನ್ಯಾಸಗೊಂಡ ಒಂದು ಸುಲಭವಾದ, ಆದರೆ ಪ್ರಬಲವಾದ ಮಾರ್ಗದರ್ಶಿತ ಧ್ಯಾನವಾಗಿದೆ. “ಈಶಾ” ಎಂದರೆ ಸೃಷ್ಟಿಯ ಮೂಲ. "ಕ್ರಿಯಾ" ಎಂದರೆ ಆಂತರ್ಯದೆಡೆಗಿನ ಪಯಣ.
ಹಾರ್ವರ್ಡ್ ವೈದ್ಯಕೀಯ ಶಾಲೆ ನಡೆಸಿದ ಸಂಶೋಧನೆಯಲ್ಲಿ, ಈ ಧ್ಯಾನವು ಉದ್ವೇಗ, ಕೋಪ, ಆಯಾಸ, ಗೊಂದಲ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ ಎಂದು ಸಾಬೀತಾಗಿದೆ.
ಅವಧಿ: 12-18 ನಿಮಿಷಗಳು
ವೆಬಿನಾರ್ ರೂಪದಲ್ಲಿಯೂ ಅರ್ಪಿಸಲಾಗುತ್ತಿದೆ
ಜೀವನದಲ್ಲಿ ಬಯಸಿದ್ದನ್ನು ಸೃಷ್ಟಿಸಲು ಮನಸ್ಸಿನ ಶಕ್ತಿಯನ್ನು ಬಳಸುವುದನ್ನು ಚಿತ್ ಶಕ್ತಿ ಎಂದು ಕರೆಯಲಾಗುತ್ತದೆ. ನಾಲ್ಕು ಚಿತ್ ಶಕ್ತಿ ಧ್ಯಾನಗಳು ಉಚಿತವಾಗಿ ಲಭ್ಯವಿದೆ ಮತ್ತು ನಿಮ್ಮ ಜೀವನದಲ್ಲಿ ಪ್ರೀತಿ, ಆರೋಗ್ಯ, ಶಾಂತಿ ಮತ್ತು ಯಶಸ್ಸನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.
ಅವಧಿ: 20 ನಿಮಿಷಗಳು
ಪ್ರಾಣ ಶಕ್ತಿಯಲ್ಲಿ ಸ್ಥಿರತೆ ಮತ್ತು ಸಮತೋಲನವನ್ನು ತರಲು ಸದ್ಗುರುಗಳು ಇನ್‍ಫಿನಿಟಿ ಮಾರ್ಗದರ್ಶಿತ ಧ್ಯಾನವನ್ನು ವಿನ್ಯಾಸಗೊಳಿಸಿದ್ದಾರೆ. ಅಮಿತವಾದ ಅನುಭವವನ್ನು ಪಡೆಯುವ ಸಾಧ್ಯತೆಯನ್ನು ಇದು ತೆರೆಯುತ್ತದೆ.
ಅವಧಿ: 30 ನಿಮಿಷಗಳು (ಸೂಚನೆಗಳೊಂದಿಗೆ)
20 ನಿಮಿಷಗಳು (ಧ್ಯಾನ)
ಶೀಘ್ರ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳನ್ನು ಆನಂದಿಸಲು ಸುಲಭ ಮಾರ್ಗವೆಂದರೆ ಈಶಾ ಯೋಗ ಟೂಲ್ಸ್ ಆಪ್, ಇದನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು. ಯೋಗ ವಿಜ್ಞಾನವನ್ನು ಆಧರಿಸಿ ಸದ್ಗುರುಗಳು ವಿನ್ಯಾಸಗೊಳಿಸಿದ, ಈ 5 ನಿಮಿಷಗಳ ಅಭ್ಯಾಸಗಳು, ಪ್ರತಿದಿನವೂ ಮಾಡಿದಾಗ, ಅದು ನಿಮ್ಮ ಜೀವನವನ್ನು ಪರಿವರ್ತಿಸಬಹುದು!
ಇನ್ನರ್ ಇಂಜಿನಿಯರಿಂಗ್ ಯೋಗ ವಿಜ್ಞಾನದಿಂದ ಆರಿಸಲ್ಪಟ್ಟ ಯೋಗಕ್ಷೇಮಕ್ಕಾದ ತಂತ್ರಜ್ಞಾನವಾಗಿದೆ. ಸ್ವಯಂ ಪರಿವರ್ತನೆಯ ಶಕ್ತಿಯುತ ಪ್ರಕ್ರಿಯೆಗಳು, ಸಾಂಪ್ರದಾಯಿಕ ಯೋಗದಿಂದ ಪಡೆದ ಸಾರ, ಜೀವನದ ಪ್ರಮುಖ ಅಂಶಗಳನ್ನು ಅರಿಯಲು ಬೇಕಾದ ಧ್ಯಾನಗಳು ಮತ್ತು ಪ್ರಾಚೀನ ಜ್ಞಾನದ ರಹಸ್ಯಗಳ ಮೂಲಕ ನಿಮ್ಮೊಳಗಿನ ಅತ್ಯುನ್ನತ ಸಾಮರ್ಥ್ಯವನ್ನು ಹೊರತರುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ನಿಮ್ಮ ಸ್ವಂತ ಸ್ಥಳದಲ್ಲಿ, ನಿಮ್ಮದೇ ಸ್ವಂತ ವೇಗದಲ್ಲಿ ಸದ್ಗುರು ಅವರೊಂದಿಗೆ ಇನ್ನರ್ ಇಂಜಿನಿಯರಿಂಗ್ ಆನ್‌ಲೈನ್ (ಐಇಒ) ಅನುಭವ ಪಡೆಯಿರಿ. ಇನ್ನರ್ ಇಂಜಿನಿಯರಿಂಗ್ ಆನ್‌ಲೈನ್ 90 ನಿಮಿಷಗಳ ಏಳು ಸೆಷನ್‌ಗಳನ್ನು ಒಳಗೊಂಡಿದೆ, ಇದು ಪ್ರಾಚೀನ ಯೋಗದ ವಿಜ್ಞಾನದಿಂದ ಪ್ರಬಲ ಸಾಧನಗಳನ್ನು ನೀಡುತ್ತದೆ, ನೀವು ವಾಸಿಸುವ, ನಡೆಸುವ ಮತ್ತು ನಿಮ್ಮ ಜೀವನವನ್ನು ಅನುಭವಿಸುವ ವಿಧಾನವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ.
ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ನಿಮ್ಮ ಸಂಪೂರ್ಣ ಆರೋಗ್ಯ ಮತ್ತು ಯೋಗಕ್ಷೇಮವನ್ನು ಬೆಂಬಲಿಸಲು ಯೋಗ ವಿಜ್ಞಾನವು ಅನೇಕ ನೈಸರ್ಗಿಕ ಪರಿಹಾರಗಳ ಕುರಿತು ಒಳನೋಟವನ್ನು ನೀಡುತ್ತದೆ
ಬೇವು ಒಂದು ನೈಸರ್ಗಿಕ ಮೂಲಿಕೆ, ಅದು ಬೇವಿನ ಮರದಿಂದ ಬರುತ್ತದೆ. ಇದರ ಸೇವನೆಯು ಜೀರ್ಣಕಾರಿ, ಉಸಿರಾಟ ಮತ್ತು ರಕ್ತಪರಿಚಲನಾ ವ್ಯವಸ್ಥೆಗಳು, ಮೂತ್ರನಾಳ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಗೆ ಪ್ರಯೋಜನಕಾರಿಯಾಗಿದೆ. ಒಟ್ಟಾರೆಯಾಗಿ, ಬೇವು ದೇಹದ ನೈಸರ್ಗಿಕ ಶುದ್ಧೀಕರಣ ಮತ್ತು ಆರೋಗ್ಯಕರ ಅಂಗಾಂಶಗಳ ಪುನಶ್ಚೇತನವನ್ನು ಮಾಡುತ್ತದೆ. ಬೇವಿನ ನಿಯಮಿತ ಸೇವನೆಯು ಈ ಕೆಳಗಿನ ಪ್ರಯೋಜನಗಳನ್ನು ನೀಡುತ್ತದೆ ಎಂದು ವಿವಿಧ ವೈದ್ಯಕೀಯ ದಾಖಲೆಗಳು ಹೇಳುತ್ತವೆ:
ಅರಿಶಿನ ಒಂದು ಮಸಾಲೆ ಪದಾರ್ಥವಾಗಿದೆ. ಏಷಿಯಾದ ಆಹಾರಗಳಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಅರಿಶಿನ ಸಾಂಬಾರ ಪದಾರ್ಥದಲ್ಲಿ ಬಳಸುವ ಮುಖ್ಯ ಮಸಾಲೆ ಪದಾರ್ಥ ಎಂಬುದನ್ನು ನೀವು ತಿಳಿದಿರಬಹುದು. ಅರಿಶಿನವನ್ನು ಔಷಧ ತಯಾರಿಕೆಯಲ್ಲಿಯೂ ವ್ಯಾಪಕವಾಗಿ ಬಳಸುತ್ತಾರೆ.
Benefits:ತಾಮ್ರದ ಪಾತ್ರೆಗಳಲ್ಲಿ ಸಂಗ್ರಹವಾಗಿರುವ ನೀರು ನಮ್ಮ ವ್ಯವಸ್ಥೆಯಲ್ಲಿನ ವಿವಿಧ ಜೀವಾಣುಗಳ ಶುದ್ಧೀಕರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
"ನೀರಿಗೆ ನೆನಪಿನ ಶಕ್ತಿ ಇರುವುದರಿಂದ, ನಾವು ಅದನ್ನು ಹೇಗೆ ಸಂಗ್ರಹಿಸಿಡುತ್ತೇವೆ ಎಂಬುದರ ಬಗ್ಗೆ ನಾವು ತುಂಬಾ ಕಾಳಜಿ ವಹಿಸಬೇಕು. ನೀವು ತಾಮ್ರದ ಪಾತ್ರೆಯಲ್ಲಿ ನೀರನ್ನು ಶೇಖರಿಸಿ, ರಾತ್ರಿಯಿಡೀ ಅಥವಾ ಕನಿಷ್ಠ ನಾಲ್ಕು ಗಂಟೆಗಳ ಕಾಲ ಇಟ್ಟರೆ, ನೀರು ತಾಮ್ರದಿಂದ ಒಂದು ನಿರ್ದಿಷ್ಟ ಗುಣವನ್ನು ಪಡೆದುಕೊಳ್ಳುತ್ತದೆ, ಇದು ವಿಶೇಷವಾಗಿ ನಿಮ್ಮ ಯಕೃತ್ತಿಗೆ ಮತ್ತು ಸಾಮಾನ್ಯವಾಗಿ ನಿಮ್ಮ ಆರೋಗ್ಯ ಮತ್ತು ಶಕ್ತಿಗೆ ಒಳ್ಳೆಯದು.” —ಸದ್ಗುರು
ತಾಮ್ರವು ಸೂಕ್ಷ್ಮಜೀವಿಗಳನ್ನು ತಡೆಯುವ ಗುಣ ಹೊಂದಿದೆ. ಇದು ಕೆಲವೇ ನಿಮಿಷಗಳಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ಕೊಲ್ಲುತ್ತದೆ. ಸಂಶೋಧನಾ ಅಧ್ಯಯನಗಳು
ಆಯುರ್ವೇದ ಹರ್ಬಲ್ ಜ್ಯಾಮ್ 4000 ವರ್ಷಗಳಷ್ಟು ಪ್ರಾಚೀನ ಉತ್ಕರ್ಷಣ ನಿರೋಧಕ-ಸಮೃದ್ಧ, ಯೌವನವನ್ನು ಉಳಿಸುವ ಸೂತ್ರವಾಗಿದ್ದು, ಇದನ್ನು ಸಾಂಪ್ರದಾಯಿಕವಾಗಿ ದೀರ್ಘಾಯುಷ್ಯಕ್ಕಾಗಿ ಅಮೃತವಾಗಿ ಬಳಸಲಾಗುತ್ತದೆ. ಬಲವಾದ ಶಕ್ತಿದಾಯಕ ಮತ್ತು ರೋಗನಿರೋಧಕ ವರ್ಧಕವಾದ ಇದು, ನಂಜು ನಿವಾರಣೆ, ಆರೋಗ್ಯಕರ ಜೀರ್ಣಕಾರಿ ಕ್ರಿಯೆ, ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಉತ್ತೇಜಿಸುತ್ತದೆ. ಈ ರುಚಿಕರವಾದ ಮಿಶ್ರಣವನ್ನು ಸಾವಯವ ಗಿಡಮೂಲಿಕೆಗಳು ಮತ್ತು ಮಸಾಲೆಗಳೊಂದಿಗೆ ಹಿಮಾಲಯದ ಸಾವಯವ ಅಮಲಾಕಿ ಹಣ್ಣಿನಿಂದ ತಯಾರಿಸಲಾಗುತ್ತದೆ. ಆಯುರ್ವೇದ ಹರ್ಬಲ್ ಜ್ಯಾಮ್ ಯೌವನ, ಮತ್ತು ಚೈತನ್ಯವನ್ನು ಉತ್ತೇಜಿಸುತ್ತದೆ.
ನೀವು ಹವಾಮಾನದಿಂದಾಗಿ ಅಥವಾ ಅನಾರೋಗ್ಯದಿಂದ ಬಳಲುತ್ತಿರುವಾಗ ಇದು ಉತ್ತಮ ಖಾದ್ಯವಾಗಿದೆ. ಇದು ರುಚಿಕರವಾಗಿರುವುದಲ್ಲದೇ, ವಿಟಮಿನ್‍ಗಳು, ಕಬ್ಬಿಣ ಮತ್ತು ಮೆಗ್ನೀಸಿಯಮ್ನಿಂದ ತುಂಬಿರುತ್ತದೆ, ಅದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಗಣನೆ: 3-4
ಪದಾರ್ಥಗಳು:
ವಿಧಾನ:
ಗಣನೆ: 2
ಪದಾರ್ಥಗಳು:
ವಿಧಾನ:
ಗಣನೆ: 4-5
ಪದಾರ್ಥಗಳು:
ವಿಧಾನ:
ಗಣನೆ: 2
ಪದಾರ್ಥಗಳು:
ವಿಧಾನ:
ಗಣನೆ: free-ym:recipes:carrotGingerSmoothie:servings
ಪದಾರ್ಥಗಳು:
ವಿಧಾನ:
ಗಣನೆ: 2
ಪದಾರ್ಥಗಳು:
ವಿಧಾನ:
ಗಣನೆ: 5
ಪದಾರ್ಥಗಳು:
ವಿಧಾನ:
ಗಣನೆ: 2
ಪದಾರ್ಥಗಳು:
ವಿಧಾನ:
ಗಣನೆ: 2
ಪದಾರ್ಥಗಳು:
ವಿಧಾನ: