ಅನ್ವೇಷಿಸಿ
ನೋಂದಾಯಿಸಿ
ಸದ್ಗುರು
Login

Inner Engineering Online

ಸದ್ಗುರುಗಳೊಂದಿಗೆ ಇಂಜಿನಿಯರಿಂಗ್ ನ ಅನುಭವವನ್ನು ನಿಮ್ಮದೇ ಸ್ಥಳದಲ್ಲಿ ನಿಮ್ಮದೇ ಆದ ಗತಿಯಲ್ಲಿ ಪಡೆಯಿರಿ. ಇನ್ನರ್ ಇಂಜಿನಿಯರಿಂಗ್ ಆನ್‍ಲೈನ್ 90 ನಿಮಿಷಗಳ ಏಳು ಸೆಷನ್ ಹೊಂದಿದ್ದು, ಪ್ರಾಚೀನ ಯೋಗ ವಿಜ್ಞಾನದ ಶಕ್ತಿಯುತ ಸಾಧನಗಳನ್ನು ಒಳಗೊಂಡಿದೆ. ಈ ಸಾಧನಗಳು ನಿಮ್ಮ ಜೀವನದ ವಿಧಾನ ಮತ್ತು ಅನುಭವಗಳೆಲ್ಲವನ್ನೂ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ.

Course Highlights

ಪ್ರಯಾಸರಹಿತ ಜೀವನಕ್ಕಾಗಿ ಪ್ರಾಯೋಗಿಕ ಸಾಧನಗಳು

ಜೀವನದ ಪ್ರಮುಖ ಅಂಶಗಳ ಜೊತೆ ವ್ಯವಹರಿಸಲು ಧ್ಯಾನ

ಪುನಶ್ಚೇತನ ಮತ್ತು ಸಮತೋಲನಕ್ಕಾದ ಯೋಗಾಭ್ಯಾಸಗಳು

ಜಾಗೃತಿಯ ಸಾಧನಗಳು

ನಿರಂತರ ಬೆಂಬಲ

ಪ್ರಶ್ನೋತ್ತರ ವೀಡಿಯೋಗಳ ನಿಧಿಗೆ ಜೀವನಪರ್ಯಂತ ಅವಕಾಶ

ಕೋರ್ಸ್‍ನ ರಚನೆ

ಸೆಷನ್ 1
ಅರಿತುಕೊಳ್ಳಿ ಬದುಕಿನ ನಟ್-ಬೋಲ್ಟ್ ಗಳನ್ನು

ಈ ಭೂಮಿಯ ಅತ್ಯಂತ ಆಧುನಿಕ ಯಂತ್ರವೆಂದರೆ ಅದು ಮಾನವ ದೇಹ. ಆದರೆ ಅದರ ಬಳಕೆಯ ಕುರಿತಾದ ಕೈಪಿಡಿಯನ್ನು ನೀವು ಓದಿಲ್ಲ. ನಾವದನ್ನು ಅನ್ವೇಷಿಸೋಣ. —Sadhguru

ಸೆಷನ್ 2
ಏಕೈಕ ಬಂಧನ

ನಿಮ್ಮ ಆಸೆಗಳನ್ನು ಅಮಿತವಾಗಿ ತೆರೆಯಿರಿ; ಅವುಗಳನ್ನು ಅಲ್ಪಕ್ಕೆ ಸೀಮಿತಗೊಳಿಸಬೇಡಿ. ಆಸೆಯ ಅಮಿತತೆಯೇ ನಿಮ್ಮ ಪರಮ ಸ್ವಭಾವ —Sadhguru

ಸೆಷನ್ 3
ಜೀವನವನ್ನು ಪರಿಪೂರ್ಣವಾಗಿ ಜೀವಿಸಿ

ನೀವು ಯಾರು ಎಂಬ ಸ್ವರೂಪವನ್ನು ಯಾವುದೇ ಮಿತಿಯಿಲ್ಲದೇ ವಿಸ್ತರಿಸಿಕೊಂಡಾಗಲೇ ನಿಮ್ಮ ಜೀವನವನ್ನು ಪರಿಪೂರ್ಣವಾಗಿ ಜೀವಿಸಬಲ್ಲಿರಿ. ನಿಮ್ಮ ಜೀವನದಲ್ಲಿ ನೀವು ತಿಳಿಯಬಹುದಾದ ಏಕೈಕ ನೆರವೇರಿಕೆಯೆಂದರೆ, ನಿಮ್ಮ ಜೀವನವನ್ನು ಪರಿಪೂರ್ಣವಾಗಿ ಜೀವಿಸುವುದು. —Sadhguru

ಸೆಷನ್ 4
ನೀವೇನು ಅಂದುಕೊಂಡಿದ್ದೀರೋ, ನೀವು ಅದಲ್ಲ

ನಿಮ್ಮ ಜೀವನದ ಪ್ರತಿ ಕ್ಷಣವನ್ನೂ ಸಂಪೂರ್ಣ ಇಚ್ಛೆಯಿಂದ ನಡೆಸಿದರೆ, ಅದನ್ನು ಸ್ವರ್ಗವನ್ನಾಗಿಸಿಕೊಳ್ಳಬಹುದು. ಇಚ್ಛೆಯಿಲ್ಲದೇ ನಡೆಸಿದ ಜೀವನವು ಖಚಿತವಾದ ನರಕ. —Sadhguru

ಸೆಷನ್ 5
ಮನಸ್ಸು - ಒಂದು ಅದ್ಭುತ ಚಮತ್ಕಾರ

ಬಹಳಷ್ಟು ಜನರು ತಮ್ಮ ಮನಸ್ಸನ್ನು ಹತೋಟಿಯಲ್ಲಿಡಲು ಪ್ರಯತ್ನಿಸುತ್ತಾರೆ. ನಿಮ್ಮ ಮನಸ್ಸನ್ನು ಅದರ ಪೂರ್ಣವಾದ ಸಾಧ್ಯತೆಯೆಡೆಗೆ ಏರಿಸಲು ನಾನು ಬಯಸುತ್ತೇನೆ. —Sadhguru

ಸೆಷನ್ 6
ಸೃಷ್ಟಿಯ ಧ್ವನಿ

ಪದಗಳು ಮತ್ತು ಅರ್ಥಗಳು ಮನುಷ್ಯನ ಮನಸ್ಸಿನ ಮಿತಿಯಲ್ಲಷ್ಟೇ ಇರುತ್ತವೆ - ಧ್ವನಿ ಮಾತ್ರವೇ ಸೃಷ್ಟಿಯ ಅತ್ಯಂತ ಅವಶ್ಯಕ ಅಂಶ. —Sadhguru

ಸೆಷನ್ 7
ನಿಮಗೆ ಏನು ಬೇಕೋ ಅದನ್ನು ರೂಪಿಸಿಕೊಳ್ಳಿ

ನಿಮ್ಮ ಸ್ವಾಸ್ಥ್ಯ ಮತ್ತು ನಿಮ್ಮ ಅನಾರೋಗ್ಯ, ನಿಮ್ಮ ಸಂತೋಷ ಮತ್ತು ನಿಮ್ಮ ದುಃಖ, ಎಲ್ಲವೂ ಸೃಷ್ಟಿಯಾಗುವುದು ನಿಮ್ಮೊಳಗಿನಿಂದಲೇ. ನೀವು ಯೋಗಕ್ಷೇಮವನ್ನು ಬಯಸುತ್ತಿದ್ದರೆ, ಆಂತರ್ಯದ ಕಡೆಗೆ ತಿರುಗುವ ಸಮಯವಿದು. —Sadhguru

ಖರೀದಿಸಿ

ಈಶಾ ಶಾಪಿ

ಸದ್ಗುರು ಆಪ್‍ ಡೌನ್‍ಲೋಡ್ ಮಾಡಿ

© 2022, Isha Foundation, Inc.
ನಿಯಮಗಳು ಮತ್ತು ಷರತ್ತುಗಳು. |
ಗೌಪ್ಯತಾ ನೀತಿ. | Powered by Fastly