ಅನ್ವೇಷಿಸಿ
ನೋಂದಾಯಿಸಿ
ಸದ್ಗುರು
Login

Yoga & MeditationPractices recommended by Sadhguru for these challenging times.Join Free Webinar

ನೀವು ಚಿಂತಿತರಾಗಿರುವ ಸಮಯಕ್ಕೆ ಹೋಲಿಸಿದರೆ, ನೀವು ಉತ್ಸಾಹಭರಿತ ಹಾಗೂ ಸಂತೋಷಭರಿತವಾಗಿದ್ದಾಗ ನಿಮ್ಮ ರೋಗ ನಿರೋಧಕ ಶಕ್ತಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಜೀವನದ ಸಂಪೂರ್ಣತೆಯೇ ಆರೋಗ್ಯ.
- ಸದ್ಗುರು

<headingh1><nowrap>ಸವಾಲಿನ ಸಮಯದಲ್ಲಿ</nowrap>, ಸದ್ಗುರುಗಳು ಶಿಫಾರಸು ಮಾಡಿರುವ ಪರಿಣಾಮಕಾರಿ ಅಭ್ಯಾಸಗಳು</headingh1><headingh2> ಉಚಿತ ಆನ್‌ಲೈನ್ ವೆಬಿನಾರ್-ಗಳನ್ನು ಸೇರಿಕೊಳ್ಳಿ</headingh2>

ಈ ಸಾಂಕ್ರಾಮಿಕದ ಸಮಯದಲ್ಲಿ ಸದ್ಗುರುಗಳು ನಮ್ಮ ಯೋಗಕ್ಷೇಮವನ್ನು ಬೆಂಬಲಿಸುವ ಕೆಲವು ಪರಿಣಾಮಕಾರಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತಾರೆ. ತೀವ್ರ ಬಿಕ್ಕಟ್ಟಿನ ಈ ಸಮಯದಲ್ಲಿ, ಈ ಅಭ್ಯಾಸಗಳು ನಮ್ಮ ಜೀವವ್ಯವಸ್ಥೆಯನ್ನು ಬಲಪಡಿಸುತ್ತವೆ ಮತ್ತು ಆಂತರ್ಯದಲ್ಲಿ ಸಮತೋಲನವನ್ನು ತರುತ್ತವೆ.

ಈ ಅಭ್ಯಾಸಗಳನ್ನು ತರಬೇತಿ ಪಡೆದ ಈಶಾ ಯೋಗ ಶಿಕ್ಷಕರು ಆನ್‌ಲೈನ್ ವೆಬಿನಾರ್‌ಗಳ ಮೂಲಕ ನೀಡುತ್ತಾರೆ, ಈ ವೆಬಿನಾರ್-ಗಳಲ್ಲಿ ಯೋಗ ಮತ್ತು ಧ್ಯಾನದ ಜೊತೆಗೆ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಯೋಗವಿಜ್ಞಾನದಲ್ಲಿನ ಆರೋಗ್ಯಕ್ಕೆ ಸಂಬಂಧಪಟ್ಟ ಉಪಯುಕ್ತ ಮಾಹಿತಿ ಕೂಡ ಇರುತ್ತದೆ.

Webinars

ಆರೋಗ್ಯಕರ ಶ್ವಾಸಕೋಶಕ್ಕಾಗಿ ಯೋಗ
ಸಿಂಹ ಕ್ರಿಯಾ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸಲು ಸರಳವಾದ ಯೋಗ ಪ್ರಕ್ರಿಯೆ

&nbsp;ಸದ್ಗುರುಗಳು ಈ ಯೋಗ ಪ್ರಕ್ರಿಯೆಯನ್ನು ನಿರ್ದಿಷ್ಟವಾಗಿ ಉಸಿರಾಟದ ವ್ಯವಸ್ಥೆಯನ್ನು ಬೆಂಬಲಿಸಲು, ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಿದ್ದಾರೆ.

ಉಪಯೋಗಗಳು
  • ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ
  • ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
  • ನಿಮಗೆ ಉಸಿರಾಟದ ಸಮಸ್ಯೆ ಇದ್ದರೆ ಗುರುತಿಸಲು ಸಹಾಯ ಮಾಡುತ್ತದೆ

ಅವಧಿ: 60 ನಿಮಿಷಗಳು
ಎಲ್ಲರಿಗೂ ಮುಕ್ತ

ಪ್ರಾರಂಭದ ಹಂತದವರಿಗಾಗಿ ಧ್ಯಾನ
ಈಶಾ ಕ್ರಿಯಾ

ಈಶಾ ಕ್ರಿಯಾ ಸದ್ಗುರುಗಳು ವಿನ್ಯಾಸಗೊಳಿಸಿರುವ ಸುಲಭವಾದ, ಆದರೆ ಶಕ್ತಿಶಾಲಿ ಧ್ಯಾನ. "ಈಶಾ" ಎಂದರೆ ಜಗತ್ತಿನ ಸೃಷ್ಟಿಯ ಮೂಲ ಎಂದರ್ಥ "ಕ್ರಿಯಾ" ಎಂದರೆ ಅದರ ಕಡೆಗೆ ಒಂದು ಒಳಮುಖ ಕ್ರಿಯೆ.

ಉಚಿತ ಮಾರ್ಗದರ್ಶಿತ ಧ್ಯಾನವಾದ ಈಶಾ ಕ್ರಿಯಾ, ಕೇವಲ 12-18 ನಿಮಿಷಗಳನ್ನು ತೆಗೆದುಕೊಳ್ಳುವ ಮತ್ತು ಸುಲಭದಲ್ಲಿ ಕಲಿಯಬಹುದಾದ ಪ್ರಕ್ರಿಯೆ. ನೀವು ಇದನ್ನು ಮನೆಯಲ್ಲಿ, ಕೆಲಸ ಮಾಡುವಲ್ಲಿ ಅಥವಾ ನೀವು ಎಲ್ಲಿದ್ದರೂ ಮಾಡಬಹುದು. ಈ ಧ್ಯಾನ ನಿಮ್ಮಲ್ಲಿ ಸ್ಪಷ್ಟತೆ, ಆರೋಗ್ಯ ಮತ್ತು ಆನಂದವನ್ನು ತರುತ್ತದೆ.

ಅವಧಿ: 60 ನಿಮಿಷಗಳು
ಎಲ್ಲರಿಗೂ ಮುಕ್ತ
ವಯಸ್ಸು 12+

ಖರೀದಿಸಿ

ಈಶಾ ಶಾಪಿ

ಸದ್ಗುರು ಆಪ್‍ ಡೌನ್‍ಲೋಡ್ ಮಾಡಿ

© 2022, Isha Foundation, Inc.
ನಿಯಮಗಳು ಮತ್ತು ಷರತ್ತುಗಳು. |
ಗೌಪ್ಯತಾ ನೀತಿ. | Powered by Fastly